ಅಮೇರಿಕದ ಸಂಶೋಧಕರಾಗಿದ್ದ ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್‌ರವರು ನ್ಯೂಯಾರ್ಕಿನಲ್ಲಿ ೧೮೯೦ರ ಡಿಸೆಂಬರ್ ೧೮ರಂದು ಜನಿಸಿದರು. ೧೯೦೬ರಲ್ಲಿ ಲೀ ಡಿ ಫಾರೆಸ್ಟ್ ಸಂಶೋಧಿಸಿದ್ದ ‘ಆಡಿಯೋನ್’ ಎಂಬ ಟ್ರಯೋಡ್ ಕವಾಟದ ( ) ಪ್ರವರ್ಧನಾ ಸಾಮರ್ಥ್ಯವನ್ನು ಉಪಯೋಗಿಸಿ ಆರ್ಮ್‌ಸ್ಟ್ರಾಂಗ್‌ರವರು ಪುನರ್ಭವನ ರೇಡಿಯೋ ಗ್ರಾಹಕ ಮಂಡಲವನ್ನು ( ) ೧೯೧೨ರಲ್ಲಿ ಸಂಶೋಧಿಸಿದರು. ಆ ಸಂಶೋಧನೆ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅವರ ಸಂಶೋಧನೆ ಯಾವ ವಿಕೃತಿಯೂ ಇಲ್ಲದೆ ( ) ದುರ್ಬಲ ರೇಡಿಯೋ ಸಂಕೇತಗಳನ್ನು ಪ್ರವರ್ಧಿಸುವುದರಲ್ಲಿ ಸಹಕಾರಿಯಾಯಿತು. ಆರ್ಮ್‌ಸ್ಟ್ರಾಂಗ್‌ರವರು ತಮ್ಮ ಆ ಸಂಶೋಧನೆಗೆ ಪೇಟೆಂಟ್ ಗಳಿಸಿದರು. ೧೯೩೩ಯಲ್ಲಿ ಆರ್ಮ್‌ಸ್ಟ್ರಾಂಗ್‌ರವರು ಭೌತವಿಜ್ಞಾನಿ ಮೈಕೇಲ್ ಪ್ಯೂಪಿನ್‌ರವರ ಜೊತೆ ಸೇರಿ, ಎಫ್.ಎಮ್. ಪ್ರಸಾರ ವ್ಯವಸ್ಥೆಯನ್ನು ( ) ಸಂಶೋಧಿಸಿದರು. ಆರ್ಮ್‌ಸ್ಟ್ರಾಂಗ್‌ರವರು ೧೯೫೪ರ ಜನವರಿ ೩೧ರಂದು ಆತ್ಮಹತ್ಯೆ ಮಾಡಿಕೊಂಡರು. == ಉಲ್ಲೇಖಗಳು ==